Wednesday, 14 December 2016

ಕನಸು :)

ಕನಸೊಂದನು ಕಾಣುತಿದ್ದೆ ನಿನ್ನ ಜೊತೆ ಬಾಳಬೇಕೆಂದು
ಆ ದೇವರಿಗೆ ದಿನವೂ ಬೇಡುತಿದ್ದೆ ನೆರೆವೆರಿಸು ಎಂದು

ಕನಸೊಂದನು ಕಾಣುತಿದ್ದೆ ನಿನ್ನ ಜೊತೆ ಹೆಜ್ಜೆ ಹಾಕಬೇಕೆಂದು
ಆ ದೇವರಿಗೆ ಹರಕೆ ಹೊತಿದ್ದೆ ಆಸೆ ಈಡೇರಿಸು ಎಂದು

ಇಂದು ಬೇರೆಯವನ ಕೈ ಹಿಡಿದು ಅವನ ಮಡದಿ ಆದೆ ನೀನು,
ಮದುವೆ ಆಗದೆ ಹಾಗೆ ಉಳಿದಿರುವೆ ನಾನು

ನಿನ್ನ ಮದುವೆ ದಿನದಂದು ಕಂಡೆ ಮತೊಬ್ಬ ಚೆಲುವೆಯನ್ನು
ಅಂದೆ ನಿರ್ಧರಿಸಿದೆ ಮತ್ತೆ ಪ್ರೀತಿ ಮಾಡಬೇಕೆಂದು, ನಂತರ ತಿಳಿದದ್ದು ಅವಳು ನಿನ್ನ ತಂಗಿ ಎಂದು

ಕನಸೊಂದನು ಮತ್ತೆ ಕಾಣುತಿರುವೆ ನಾನು ನಿನ್ನ ತಂಗಿಯ ಜೊತೆ ಬಾಳಬೇಕೆಂದು
ಆ ದೇವರಿಗೆ ಮತ್ತೆ ಬೇಡುತಿರುವೆ ನಿನ್ನ ತಂಗಿಯ ಜೊತೆ ಆದರೂ ಹೆಜ್ಜೆ ಹಾಕಿಸು ಎಂದು.

Wednesday, 16 November 2016

ತಿಂಗಳ ಚಂದ್ರ

ತಿಂಗಳ ಚಂದ್ರನ ಕೆಳಗೆ ನಿಂತಿರಲು,
ತಂಪಾದ ಗಾಳಿಯು ಬೀಸುತಿರಲು,
ನಕ್ಷತ್ರಗಳು ಮಿನುಗುತಿರಲು

ನನ್ನ ಮನದಲ್ಲಿ ಹೊಸದೊಂದು ಆಸೆಯೂ ಚಿಮ್ಮುತಿದೆ,
ನಿನ್ನ ಮುದ್ದಾದ ಮೊಗವು ಕಣ್ಣ ಮುಂದೆ ಬರುತಲಿದೆ,
ಇಂದು ನನಗೆ ಪ್ರೀತಿ ಹುಟ್ಟಿದೆ

ಏಕಾಂಗಿ

ಎಲ್ಲರೂ ದೂರವಾಗುತಿರುವರು ನನ್ನಿಂದ,
ಅಳಬೇಕೆನಿಸುತಿದೆ ತುಂಬು ಹೃದಯದಿಂದ,
ಹೇಳಿಕೊಳ್ಳಬೇಕು ಯಾರಾ ಜೊತೆಯಾದರೂ ತೆರದ ಮನಸಿನಿಂದ,
ಆದರೆ ಕೇಳುವವರೇ ಇಲ್ಲ ನನ್ನಿಂದ,
ಇನ್ನೂ ಮುಂದೆ ಇರುವೆನು ನಾನು ಏಕಾಂತದಿಂದ, ಏಕಾಂತದಿಂದ

ಕವಿ

ಕವಿ ಎಂಬುವವನು, ಕೇವಲ ಪ್ರಾಸ ಪದಗಳನ್ನು ಉಪಯೋಗಿಸಿ ಬರೆಯುವ ಬರಹಗಾರನಲ್ಲ,
ತನ್ನ ಮನಸಿನ ಸುಖ-ದುಃಖಗಳನ್ನು ಕಾವ್ಯದ ರೂಪದಲ್ಲಿ ತರುವ ಚಿಂತಕ

ಪ್ರೀತಿ

ಪ್ರೀತಿ ಅರ್ಥ ತಿಳಿಸಿ ಹೇಳಿದಳು ನಾನೇ ನಿನಗೆ ಎಲ್ಲ,
ಇಂದು ಪ್ರೀತಿ ಅರ್ಥ ಅಳಿಸಿ ಹೇಳಿದಳು ನಾನು ನಿನಗಿಲ್ಲ..

ಸಚಿನ್ ತೆಂಡೂಲ್ಕರ್

ನಿನ್ನನ್ನು ನೋಡಿ ನಾನು ಕ್ರಿಕೆಟ್ ಆಡುವುದಕ್ಕೆ ಶುರು ಮಾಡಿದೆ,
ನಿನನ್ನು ನೋಡಿ ನಾನು ಕ್ರಿಕೆಟ್ ಏನೆಂದು ತಿಳಿದೆ,
ನಿನ್ನ ಚಿತ್ರವನ್ನು ಹುಡುಕಾಡಿ ನಾನು ಊರೆಲ್ಲ ಅಲೇದಾಡಿದ್ದೆ ,
ನಿನ್ನ ಆಟವನ್ನು ನೋಡಲು ನಾನು ರಾತ್ರಿಯಲ್ಲ ಹಲವು ಬಾರಿ ಎದಿದ್ದೆ

ನಿನ್ನ ಕಣ್ಣಿಗೆ ಬೀಳದ ಸಾದನೆಗಳಿಲ್ಲ,
ನೀನು ಸಾದಿಸದೆ ಉಳಿದ ಸಾದನೆಗಳಿಲ್ಲ,
ನಿನ್ನ ಆರ್ಭಟತನಕ್ಕೆ ಹೆದರದ ಬೌಲರ್ ಗಳಿಲ್ಲ,  
ನೀನು ಶತಕ ಸಿಡಿಸದೆ ಹೋದ ವಿರೋಧಿ ದೇಶಗಳಿಲ್ಲ

ನಿನ್ನ ನೋಡಿ ಕ್ರಿಕೆಟ್ ಆಡಲು ಶುರು ಮಡಿದ ಹುಡುಗರು ಹಲವಾರು,
ನಿನ್ನ ನೋಡಿ ದೊಡ್ಡ ಹುಡುಗಿಯನ್ನು ಪ್ರೀತಿಸಿದ ಹುಡುಗರು ಮತ್ತೆ ಕೆಲವರು,
ನಿನ್ನ ದೇವರ ನಂಬಿಕೆಯ ನೋಡಿ ತಾವು ನಂಬಲು ಶುರು ಮಾಡಿದ ಭಕ್ತರು ಕೆಲವರು,
ನಿನ್ನ ಒಳ್ಳೆಯತನ ನೋಡಿ ತಮ್ಮ ಜೀವನದಲ್ಲಿ ರೂಪಿಸಿಕೊಂಡವರು ಸಹಸ್ರಾರು

ನಿನ್ನ ಆಟವನ್ನು ನೋಡಲು ಹೆಂಡತಿಯ ಜೊತೆ ರಿಮೋಟ್ಗಾಗಿ ಜಗಳವಾಡುತಿದ್ದರು ಜನರು,
ನಿನ್ನ ಆಟವನ್ನು ನೋಡಲು ಆಫೀಸಿಗೆ ರಜಾ ಹಾಕುತಿದ್ದರು ಜನರು,
ನಿನ್ನ ಆಟವನ್ನು ನೋಡಲು ಪರೀಕ್ಷೆ ಇರುವುದನ್ನು ಮರೆಯುತಿದ್ದರು ಹುಡುಗರು,
ಇಂದು ನೀನು ಇಲ್ಲದ ಕ್ರಿಕೆಟನ್ನು ನೋಡುವವರು ಯಾರು

ಹಲವಾರು ಜನರ ಜೀವನಕ್ಕೆ ನೀಡಿರುವೆ ನೀನು ಮಾರ್ಗದರ್ಶನ,
ನಿನ್ನ ಆಟದ ರುಚಿಯನ್ನು ಇನ್ನು ಬಯಸಲು ಹಾತೊರೆಯುತ್ತಿದೆ ಈ ಮನ,
ಆದರೆ ಏನು ಮಾಡುವುದು ನೀನು ಆಗಲೇ ತಿಳಿಸಿರುವೆ ನಿನ್ನ ಆಟದ ಕೊನೆಯ ದಿನ,
ನಿನಗಿಂತ ದೊಡ್ಡ ಸ್ಪೂರ್ತಿ ನಮಗಿಲ್ಲ ಓ ಸಚಿನ !!

ಗೆಳತಿ

ಆ ದೇವರು ಕೇಳಿದನು ನಿನಗಾವುದು ಹಿತ ? ಸ್ನೇಹ ? ಪ್ರೀತಿ ?
ಆ ದೇವರು ಕೇಳಿದನು ನಿನಗಾವುದು ಹಿತ?
ನಾನು ಹೇಳಿದೆನು ಸ್ನೇಹವೇ ಹಿತ,
ನಾನು ಹೇಳಿದೆನು ಸ್ನೇಹವೇ ಹಿತ ಯಾಕೆಂದರೆ ನನ್ನ ಜೊತೆ ಇರುವಳು ನಂದಿತಾ, ನನ್ನ ಜೊತೆ ಇರುವಳು ನಂದಿತಾ ??

ಲೈಫು ಇಷ್ಟೇನೆ

ಕಾಂಪ್ಲೆಕ್ಸ್ ಆಗಿ ಒಂದು ಲೈಫ್ ಸ್ಟೋರೀ...
ನಲ್ಲಿ ತಿರ್ಗುಸುದ್ರೆ ನೀರು ಬರಲ್ಲ,
ಮಲ್ಕೋಳನ ಅಂದ್ರೆ ನಿದ್ದೆ ಬರಲ್ಲ,
ಫೋನ್ ಮಾಡನ ಅಂದ್ರೆ ಕರೆನ್ಸೀ ಇರಲ್ಲ,
ಕೊನೆಗೆ ಫೇಸ್ಬುಕ್ ಸ್ಟೇಟಸ್ ಹಾಕಣ ಅಂದ್ರೆ ಆಕ್ಸೆಸ್ ಇರಲ್ಲ !!!
ಲೈಫು ಇಷ್ಟೇನೆ

ಹೃದಯ

ಅಂದು ಹೃದಯದ ಮೇಲೆ ಕೈ ಇಟ್ಟಿ ಹೇಳಿದಳು ನೀ ನನ್ನ ನಲ್ಲ,
ಆದರೆ ಇಂದು ಬೇರೆಯವನ ಕೈ ಹಿಡಿದು ಹೋದಳು ಇಟ್ಟು ಬಾಯಿಗೆ ಬೆಲ್ಲ.. 

talent

ಕಥೆ ಹೇಳೊಕ್ಕೆ ಸ್ಟೋರೀ ಬೇಕು ಅಂಥ ಏನು ಇಲ್ಲ... ನರೇಷನ್ ಮಾಡೋಕ್ ಬಂದ್ರೆ ಸಾಕು...
ಹುಡ್ಗೀನ್ ಬೀಳ್ಸಕ್ಕೆ ಟ್ಯಾಲೆಂಟ್ ಬೇಕು ಅಂಥ ಏನು ಇಲ್ಲ... ಹೊಗಳಕ್ಕೆ ಬಂದ್ರೆ ಸಾಕು!!!
ಅಪ್ರೇಸಲ್ ಚನ್ನಾಗಿ ಸಿಗ್ಬೇಕು ಅಂದ್ರೆ ಕೆಲ್ಸ ಮಾಡ್ಬೇಕಂತ ಏನು ಇಲ್ಲ ಬಕೆಟ್ ಹಿಡ್ಯೋಕ್ ಬಂದ್ರೆ ಸಾಕು...

ಮುದ್ದು

ಹೃದಯದ ಗಾಯಕ್ಕೆ ಎಲ್ಲೆಲ್ಲೋ ಹುಡುಕಾಡಿದೆ ನಾನು ಮದ್ದು,
ಆದರೆ ಕೊನೆಗೆ ಅರ್ಥವಾಯಿತು ನನಗೆ ಬೇಕಾಗಿದ್ದು ಅವಳ ಮುದ್ದು

ಅವಳ ನೆನಪು

ಮಲಗಿದರೂ ನಿದ್ದೆ ಬಾರದೆ ಹೋಗಿದೆ..
ಮನಸು ಯಾಕೋ ಕುಣಿದಾಡುತಲಿದೆ..
ಕಣ್ಣು ಮೂಚಿದರೆ ನಿನ್ನ ಚಿತ್ರವೇ ಬರುತಲಿದೆ..
ನಿನ್ನ ಗೆಳೆತನ ನನ್ನ ಜೀವನಕ್ಕೆ ಕಳೆ ತಂದಿದೆ..
ನಿನ್ನ ಮೇಲೆ ನನಗೆ ಇಂದು ಪ್ರೀತಿ ಹುಟ್ಟಿದೆ..

Tuesday, 15 November 2016

ನನ್ನವಳು

ನನ್ನ ಮನಸೆಂಬ ಪುಸ್ತಕದಲ್ಲಿ ಪ್ರೀತಿ ಎಂಬ ಅರ್ಥ ಬರೆದಳು,
ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದಳು,
ಏನು ಮಾಡಿದಾರೇನನಂತೆ ಅವಳೆಂದೂ ನನ್ನವಳು,
ಅವಳೆಂದೂ ನನ್ನವಳು..