ನನ್ನಲ್ಲೆ ನಾನೀಗ ಮರೆತು ಹೋದೆನು
ನಿನ್ನಲ್ಲೆ ನಾನೀಗ ಬೆರೆತು ಹೋದೆನು
ನಿನ್ನ ಪ್ರೀತಿಗಾಗಿ ನಿನ್ನ ಸ್ನೇಹಕ್ಕಾಗಿ
ಈ ಜೀವವು ನಿನ್ನ ಖುಷಿಗಾಗಿ
ಬಾಳೋಣ ಎಂದು ಒಂದಾಗಿ ನಾವು
ಬರದಿರಲಿ ನಿನಗೆ ಎಂದೆಂದು ನೋವು
ಸಂತೋಷದ ಈ ದಿನಗಳ ಮರೆಯೋದಿಲ್ಲವೆಂದು
ಸಡಗರದ ಈ ದಿನಗಳು ಮುಗಿಯದಿರಲಿ ಎಂದು
ನಿನ್ನ ಜೊತೆಯಾಗಿ ನಿನ್ನ ಹಿತಕಾಗಿ
ಈ ಜೀವವು ನಿನ್ನ ಖುಷಿಗಾಗಿ
ನನ್ನಲ್ಲೆ ನಾನೀಗ ಮರೆತು ಹೋದೆನು
ನಿನ್ನಲ್ಲೆ ನಾನೀಗ ಬೆರೆತು ಹೋದೆನು