Monday, 19 September 2022

ಕನ್ನಡಾಂಬೆ

ಮೊಳಗುತಿರಲಿ ಪ್ರತಿಯೊಬ್ಬರ ಹೃದಯಗಳಲ್ಲಿ ಕನ್ನಡ ಗೀತೆ

ಹಾರುತಿರಲಿ ಕನ್ನಡ ಬಾವುಟ ಆಕಾಶದೆತ್ತರಕ್ಕೆ 


ಕನ್ನಡಾಂಬೆಯ ಮಡಿಲಲ್ಲಿ ನಲಿಯೋಣ ನಾವು

ಕನ್ನಡವ ಎಂದಿಗು ಬಳಸಿ ಬೆಳೆಸೋಣ ನಾವು


ತಾಯಿಯ ಉತ್ಸವ ನೆಡೆಸುವ, ಇರಲಿ ಎಂದಿಗು ಇದೆ ಉತ್ಸಾಹ

ಕನ್ನಡ ರಾಜ್ಯೋತ್ಸವ ನೆಡೆಸುವ, ಇರಲಿ ಎಂದಿಗು ನಿಮ್ಮ ಪ್ರೋತ್ಸಾಹ     


ಎದೆ ತಟ್ಟಿ ಹೇಳು ನಾನು ಕನ್ನಡಿಗನೆಂದು

ಗರ್ವದಿ ಹೇಳು ಕನ್ನಡಾಂಬೆ ನನ್ನ ತಾಯಿಯೆಂದು


ಬಾರಿಸು ಕನ್ನಡ ಡಿಂಡಿಮವ !!!

Wednesday, 27 November 2019

ಪ್ರೀತಿ


ನನ್ನಲ್ಲೆ ನಾನೀಗ ಮರೆತು ಹೋದೆನು
ನಿನ್ನಲ್ಲೆ ನಾನೀಗ ಬೆರೆತು ಹೋದೆನು

ನಿನ್ನ ಪ್ರೀತಿಗಾಗಿ ನಿನ್ನ ಸ್ನೇಹಕ್ಕಾಗಿ
 ಜೀವವು ನಿನ್ನ ಖುಷಿಗಾಗಿ
ಬಾಳೋಣ ಎಂದು ಒಂದಾಗಿ ನಾವು
ಬರದಿರಲಿ ನಿನಗೆ ಎಂದೆಂದು ನೋವು

ಸಂತೋಷದ  ದಿನಗಳ ಮರೆಯೋದಿಲ್ಲವೆಂದು
ಸಡಗರದ  ದಿನಗಳು ಮುಗಿಯದಿರಲಿ ಎಂದು
ನಿನ್ನ ಜೊತೆಯಾಗಿ ನಿನ್ನ ಹಿತಕಾಗಿ
 ಜೀವವು ನಿನ್ನ ಖುಷಿಗಾಗಿ

ನನ್ನಲ್ಲೆ ನಾನೀಗ ಮರೆತು ಹೋದೆನು
ನಿನ್ನಲ್ಲೆ ನಾನೀಗ ಬೆರೆತು ಹೋದೆನು

Wednesday, 22 May 2019

ಕನಸಲ್ಲೊಂದು ಆಸೆ

ಕನಸುಗಾರ ನಾನು ಕನಸು ಕಾಣುತ್ತಿರುವೆ  ನಾನು
ಆಸೆಗಾರ ನಾನು ಆಸೆ ಪಡುತ್ತಿರುವೆ ನಾನು

ನಿನ್ನಂಥ ಹುಡುಗಿ ಸಿಗಲಿ ನನಗೆ ಎಂದು ಕನಸು ಕಾಣುತ್ತಿರುವೆ ನಾನು
ನಿನನ್ನು ಸುಖವಾಗಿ ನೋಡಿಕೊಳ್ಳುವಷ್ಟು ದುಡ್ಡು ಸಿಗಲಿ ಎಂದು ಆಸೆ ಪಡುತ್ತಿರುವೆ ನಾನು

ಎಲ್ಲ ಜನುಮದಲ್ಲೂ ನೀನೆ ಸಿಗಲಿ ಎಂದು ಕನಸು ಕಾಣುತ್ತಿರುವೆ ನಾನು
ಎಲ್ಲ ಸುಖವು ನಿನ್ನ ಪಾಲಾಗಲಿ ಎಂದು ಆಸೆ ಪಡುತ್ತಿರುವೆ ನಾನು

ಕನಸುಗಳು ನನಸಾಗುವ ಸಮಯದಲ್ಲಿ ಬೇರೆಯವನ ಕೈ ಹಿಡಿದು ನೀನು ಹೋಗುವಾಗ ಅರಿವಾಯಿತು  
ಅತಿ ಆಸೆ ನಿರಾಸೆ ಎಂದು, ಕನಸು ನನಸಿಗಿಂತ ಚಂದ ಎಂದು 

Tuesday, 12 June 2018

ಛಲ

ಎಂದು ನಾನು ತಲೆ ಎತ್ತಿ ನೆಡೆಯುತ್ತಿದ್ದೆ
ಕಣ್ಣೀರು ಕೆಳಗಡೆ ಬೀಳದಿರಲೆಂದು

ನೆನಪಾಗುತಿತ್ತು ಆ ಪ್ರೀತಿಯ ದಿನಗಳು
ನಾನು ನೀನು ಜೊತೆಯಲ್ಲಿದ ದಿನಗಳು

ಎಂದು ನಾನು ತಲೆ ಎತ್ತಿ ನೆಡೆಯುತ್ತಿದ್ದೆ
ನೀರು ತುಂಬಿದ ಕಣ್ಣುಗಳಲ್ಲಿ ನಕ್ಷತ್ರಗಳ ಎಣಿಸುತ್ತಾ

ನೆನಪಾಗುತಿತ್ತು ಆ ಸುಖದ ದಿನಗಳು
ನಾನು ನೀನು ಕಳೆದ ಆ ಸುಂದರ ಕ್ಷಣಗಳು

ನನ್ನ ಮುಂದಿನ ರಸ್ತೆ ನನಗೆ ಕಾಣಿಸದಿದ್ದಾಗ
ಅರ್ಥವಾಯಿತು ಒಬ್ಬನೇ ಇರಲು ಸಾಧ್ಯವಿಲ್ಲ ನನಗೆಂದೂ

ತಲೆ ಎತ್ತಿ ತಿಳಿ ನೀಲಿ ಆಕಾಶವನ್ನು ನೋಡಿದಾಗ ಕಾಣಿಸಿತು
ನನ್ನ ಎಲ್ಲ ನೋವು ಹಾಗೂ ನಿನ್ನ ನಲಿವುಗಳು

ತಕ್ಷಣ ನಿರ್ಧರಿಸಿದೆ ಇದು ನನ್ನ ಆರಂಭ ಅಂತ್ಯವಲ್ಲವೆಂದು
ಅಂದೆ ಬಂದಿತು ನಿನಗಿಂತ ಚೆನ್ನಾಗಿ ಬದುಕಿ ತೋರಿಸಬೇಕೆಂಬ ಛಲವೊಂದು 

Wednesday, 11 April 2018

ಓ ಪ್ರೀತಿ ಗೆಳತಿ

ಓ ಪ್ರೀತಿ ಗೆಳತಿಯೇ...

ನನ್ನ ಹೃದಯದಲ್ಲಿ ಎಂದಿಗೂ ನೀನೇ ತುಂಬಿರುವೆ
ಎಷ್ಟೇ ಗಾಳಿ ಬೀಸಿದರು ನೀ ನನ್ನ ಬೆಚ್ಚಿಗಿಡುವೆ
ಎಷ್ಟೇ ಮಳೆ ಸುರಿದರೂ ನೀ ನನ್ನ ಬಚ್ಚಿಡುವೆ
ಆ ಸೂರ್ಯನ ಮೇಲಾಣೆ ನನಗೆಂದೂ ನೀನೇ...

ಈ ಪ್ರೀತಿಯಲ್ಲಿ ಯಾವುದು ತಪ್ಪಿಲ್ಲ
ನಿನ್ನ ಬಿಟ್ಟು ನನಗೆ ಬೇರೆ ಯಾರು ಉಳಿದಿಲ್ಲ
ಎಂದಿಗೂ ನಾನು ನಿನ್ನ ಬಿಡೋದಿಲ್ಲ
ಆ ಚಂದ್ರನ ಮೇಲಾಣೆ ನನಗೆಂದೂ ನೀನೇ...

ಓಡಿ ಬಂದು ನೋಡು ನನ್ನ ಕಣ್ಣಿನಲ್ಲಿ ಕಣ್ಣಿಟ್ಟು
ಬಿಟ್ಟುಬಿಡು ನಿನ್ನ ಎಲ್ಲ ಸಿಟ್ಟು
ಇರೋದಿಲ್ಲ ಎಂದಿಗೂ ನಾನು ನಿನ್ನ ಬಿಟ್ಟು
ಬಾ ಒಟ್ಟಿಗೆ ಕೂತು ಕುಡಿಯೋಣ ಕಾಫೀ  ಒನ್ ಬೈ ಟೂ ...

Wednesday, 15 November 2017

ಪ್ರೀತಿ ಹುಡುಗಿ

ಸೂರ್ಯನ ಬೆಳಕಿನಲ್ಲಿ ನಾ ಕಂಡ ಚೆಲುವೆ ನೀನು 
ಅಂದೇ ನಿರ್ಧರಿಸಿದೆ ನೀನೆಂದು ನನ್ನವಳೆಂದು 

ಕೇಳೆ ಹುಡುಗಿ, ನನ್ನ ಪ್ರೀತಿ ನಿನಗಾಗಿಯೇ ಎಂದಿಗೂ ಎಂದೆಂದಿಗೂ  !!


ಸಂಜೆಯ ತಿಳಿಬಾನಿನಲ್ಲಿ ನಾ ಕಂಡೆ ನಿನ್ನ ಕನಸು 
ಪ್ರೀತಿಯ ಹೃದಯದಲ್ಲಿ ನೀನೆಂದು ಶಾಶ್ವತವಾಗಿ ನೆಲೆಸು 

ಕೇಳೆ ಹುಡುಗಿ, ನಿನ್ನ ಜೊತೆಗೆ ಇರುವೆ ಎಂದಿಗೂ ಎಂದೆಂದಿಗೂ !!


ಮಳೆಯಲಿ ನಿನ್ನ ಜೊತೆಗೆ ಕುಣಿಯುವ ಮನಸಾಗಿದೆ
ನಿನಗಾಗಿಯೇ ಬದುಕಿರುವೆ ಇಂದು ನಾನು 

ಕೇಳೆ ಹುಡುಗಿ, ನಿನ್ನ ಬಿಟ್ಟು ದೂರ ಹೋಗೋದಿಲ್ಲ ಎಂದಿಗೂ ಎಂದೆಂದಿಗೂ !!


ಚಂದ್ರನ ಬೆಳಕಿನಲ್ಲಿ ನಕ್ಷತ್ರವ ಎಣಿಸುವಾಸೆ ನನಗೆ 
ಕೈಯ ಹಿಡಿದು ಲೆಕ್ಕ ಸರಿ ಮಾಡಬೇಕು ನೀನು


ಕೇಳೆ ಹುಡುಗಿ, ಜೀವವು ನಿನಗಾಗಿಯೇ ಎಂದಿಗೂ ಎಂದೆಂದಿಗೂ !!

Wednesday, 9 August 2017

ನನ್ನ ಭಾರತ

ಅಂದು ವಿವೇಕಾನಂದರು ಹೇಳಿದರು ಏಳಿ ಎದ್ದೇಳಿ ಎಂದು
ಇಂದು ಯಾರಾದರೂ ಹೇಳಬೇಡವೇ ಏಳಿ ಎದ್ದೇಳಿ ಎಂದು

ಏಳಬೇಕು ನಾವಿಂದು ಬ್ರಷ್ಟಾಚಾರದಿಂದ
ಜಾಗೃತರಾಗಬೇಕು ನಾವಿಂದು ಅತ್ಯಾಚಾರದಿಂದ

ಕಟ್ಟಬೇಕು ನಾವು ಭವ್ಯ ಭಾರತವನಿಂದು
ಕನಸಾಗಿಸಬೇಕು ಕಲಾಂ ಅವರ ಆಸೆಗಳನಿಂದು

ಗಡಿನಾಡಿನಲ್ಲಿ ರಕ್ತ ಕೊಟ್ಟ ನಮ್ಮ ಯೋಧರಿಗಾಗಿ
ಹೊಲ ಗದ್ದೆಯಲಿ ದುಡಿವ ನಮ್ಮ ಅನ್ನದಾತರಿಗಾಗಿ

ಬನ್ನಿ ಎಲ್ಲಾ ಸೇರಿ ನಿಲ್ಲೋಣ ನವ ಭಾರತ ನಿರ್ಮಾಣಕ್ಕಾಗಿ
ಎದೆಯುಬ್ಬಿಸಿ ಹೇಳೋಣ ನಾವಿದ್ದೀವಿ ನಿಮ್ಮ ಜೊತೆಯಾಗಿ

ಭಾರತ್ ಮಾತಾ ಕಿ ಜೈ !!

Monday, 7 August 2017

ಓ ದೇವ !!

ಪುಟ್ಟ ಮಗುವಿನಲ್ಲಿ ನಿಸ್ವಾರ್ಥವನಿಟ್ಟೆ ತುಟಿಯಲ್ಲಿ ನಗುವನಿಟ್ಟೆ
ದೊಡ್ಡ ಮನುಷ್ಯರಲ್ಲಿ ಸ್ವಾರ್ಥವನಿಟ್ಟೆ ಮನಸಲ್ಲಿ ಕಲ್ಮಶವನಿಟ್ಟೆ

ತಾಯಿಯ ಹೃದಯದಲ್ಲಿ ಪ್ರೀತಿಯ ಗಿಡವನು ನೆಟ್ಟೆ
ಕೆಟ್ಟ ಜನರ ಹೃದಯದಲ್ಲಿ ಅಸೂಯೆಯ ಗಿಡವನು ನೆಟ್ಟೆ

ಒಂದು ಬೀಜದಿಂದ ದೊಡ್ಡ ಮರವನು ಮಾಡಿದೆ
ಸಣ್ಣ ಹೂವಿನಿಂದ ಸುಗಂಧವನು ತಂದೆ

ಕತ್ತಲ ಬಳಿಕ ಬೆಳಕು ಬರಲೇಬೇಕು ಎಂದೇ
ಒಂದಲ್ಲಾ ಒಂದು ದಿನ ಸಾವು ಸಾಶ್ವಾತ ಎಂದೇ

ಜನರ ಹೃದಯದಲ್ಲಿರುವ  ಅಸೂಯೆಯ ಕೊಲ್ಲು
ಜನರ ಹೃದಯದಲ್ಲಿ ಹೊಸ ಉತ್ಸಾಹವ ಚೆಲ್ಲು

ಸಾಯುವುದಕ್ಕೆ ಮುನ್ನ ಏನಾದರೂ ಸಾಧಿಸುವಂತೆ ಮಾಡು
ನಿನ್ನನು ನಂಬಿರುವ ಜನಕ್ಕೆ ತಮ್ಮ ಶಕ್ತಿಯ ಮೇಲೆ ನಂಬಿಕೆ ಬರುವಂತೆ ಮಾಡು

ಏನಾದರೂ ಮಾಡು ಎಂತಾದರು ಮಾಡು
ಎಲ್ಲರಿಗೂ ಒಳ್ಳೆಯದನ್ನು ಮಾಡು ಓ ದೇವ !! 

Friday, 4 August 2017

ಅಮ್ಮ

ಈ ಭೂಮಿಗೆ ಬಂದ ಮೊದಲ ಅಮೃತ ಹನಿ ಅಮ್ಮ
ನಾ ಕಣ್ಬಿಟ್ಟ ಕೂಡಲೇ ಕಂಡ ಮೊದಲ ವ್ಯಕ್ತಿ ಅಮ್ಮ

ಭಯದಿಂದ ನಿನ್ನ ಕಂಕಳಲ್ಲಿ ಅವಿತುಕೊಂಡು ಮಾಲುಗುತಿದ್ದೆ ನಾನು
ಪ್ರತಿ ಬಾರಿ ಬಿದ್ದಾಗ ಹೇಗೆ ಮೇಲೆದ್ದು ಮುನ್ನುಗುವುದೆಂದು ಹೇಳಿಕೊಡುತಿದ್ದೆ ನೀನು

ನನ್ನ ಪ್ರತಿಯೊಂದು ಕಷ್ಟ ಸುಖದಲ್ಲಿ ಜೊತೆಗಿರುವವಳು ನೀನು
ಯಾವುದೇ ಸಂದರ್ಭದಲ್ಲಿ ನನ್ನ ರಕ್ಷಿಸುವಂತವಲು ನೀನು

ಅಮ್ಮ ಎನ್ನೋ ಎರಡೇ ಪದದಲ್ಲಿ ಜಗತನ್ನೇ ತೋರಿಸಿದೆ ನೀನು
ಪ್ರೀತಿ ಎನ್ನೋ ಎರಡೇ ಪದದಲ್ಲಿ ಭಾವನೆಗಳನ್ನು ತೋರಿಸಿದೆ ನೀನು

ಕೈ ತುತ್ತು ಕೊಟ್ಟು ನನ್ನ ಇಷ್ಟು ದೊಡ್ಡವನಾಗಿಸಿದೆ ನೀನು
ಆ ನಿನ್ನ ವಾತ್ಸಲ್ಯಕ್ಕಿಂತ  ದೊಡ್ಡದು ಇರುವುದಾದರೂ ಏನು

ಈ ಜಗತಲ್ಲಿ ದೇವರನ್ನು ಕಂಡವರು ಯಾರು ಇಲ್ಲ
ಆದರೆ ನೀನಲ್ಲೇ ದೇವರನ್ನು ಕಾಣುತಿರುವೆನು ನಾನು

ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ನನಗೆ ತಿಳಿಯದಂತೆ ಸಾಕಿದೆ ನೀನು
ಮುಂದೆ ನಿನ್ನ ಜೀವನದಲ್ಲಿ ಬರಿ ಸುಖವನ್ನೇ ಕೊಡುವೆ ಎಂದು ಪ್ರಾಮಾಣಿಸುವೆ ನಾನು

ನನಗೆ ಆದ ಪೆಟ್ಟುಗಳಿಗೆ ನೀನು ಅಳುತಿದ್ದೆ
ಹಾಲು ಕೂಡಿಸಿ ಪ್ರೀತಿ ಉಣಿಸಿ ನನ್ನ ಬೆಳೆಸುತಿದ್ದೆ

ನಗುತ ನಗುತ ಇನ್ನೆಂದೂ ಬಾಳಬೇಕು ನೀನು ಅಮ್ಮ
ನನ್ನ ಬಾಳಿನ ಎಲ್ಲ ಶಕ್ತಿಯು ನೀನೇ ಅಮ್ಮ

Thursday, 3 August 2017

ನನ್ನ ಹುಡುಗಿ

ಅಪ್ಪಿಬಿಡು ಹುಡುಗಿ ಒಮ್ಮೆ ನಿನ್ನ ಬಿಟ್ಟು ಬೇರೆ ಯಾರು ಇಲ್ಲವೆನ್ನುವಂತೆ
ಒಪ್ಪಿಬಿಡು ಹುಡುಗಿ ಒಮ್ಮೆ ನಿನ್ನ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲವೆನ್ನುವಂತೆ

ನನ್ನ ಕನಸಿನ ರಾಣಿಯೇ ನೀನು
ಎಂದು ನಿನ್ನ ಜೊತೆಗಿರುವೆನು ನಾನು

ನಮ್ಮಿಬರ ಪ್ರೀತಿಯ ನೋಡಿ ನಕ್ಷತ್ರಗಳು ಹೊಟ್ಟೆಕಿಚ್ಚು ಪಡುತಿರುವರು
ನಿಮ್ಮಿಬರಂತೆ ಒಟ್ಟಿಗೆ ಇರುವುದು ಹೇಗೆ ಎಂದು ದಿನವೂ ನನ್ನ ಕೇಳುತಿರುವರು

ಆ ಚಂದ್ರನನ್ನು ಕಳೆದು ಹೋಗುವಂತೆ ಮಾಡುವೆವು ಮೋಡಗಳು
ಆ ಚಂದ್ರನಂತೆ ಕಳೆದು ಹೋಗುವೆನು ನಾನು ನೀನಿಲ್ಲದ ಬದುಕಿನಲಿ

ಬಂದು ಬಿಗಿದಪ್ಪಿಕೋ ಇಂದೇ ಕೊನೆಯ ದಿನವೆನ್ನುವಂತೆ
ಎಂದಿಗೂ ನಿನ್ನ ಬಿಟ್ಟು ಹೋಗುವುದಿಲ್ಲವೆನ್ನುವಂತೆ

ನೀ ಹೀಗೆ ಮಾತಾಡದೆ ಮೌನವಾದಾಗಲೆಲ್ಲ
ನನ್ನ ಬಗ್ಗೆಯೇ ಯೋಚಿಸುತಿರುವಂತೆ ಭಾಸವಾಗುತಿಹುದು

ಹೇಳಿ ಬಿಡು ಹುಡುಗಿ ಇಂದು ನೀನು
ಇರುವೆಯ ನನ್ನ ಜೊತೆಗೆ ಎಂದಿಗೂ ನೀನು ..