Wednesday, 15 November 2017

ಪ್ರೀತಿ ಹುಡುಗಿ

ಸೂರ್ಯನ ಬೆಳಕಿನಲ್ಲಿ ನಾ ಕಂಡ ಚೆಲುವೆ ನೀನು 
ಅಂದೇ ನಿರ್ಧರಿಸಿದೆ ನೀನೆಂದು ನನ್ನವಳೆಂದು 

ಕೇಳೆ ಹುಡುಗಿ, ನನ್ನ ಪ್ರೀತಿ ನಿನಗಾಗಿಯೇ ಎಂದಿಗೂ ಎಂದೆಂದಿಗೂ  !!


ಸಂಜೆಯ ತಿಳಿಬಾನಿನಲ್ಲಿ ನಾ ಕಂಡೆ ನಿನ್ನ ಕನಸು 
ಪ್ರೀತಿಯ ಹೃದಯದಲ್ಲಿ ನೀನೆಂದು ಶಾಶ್ವತವಾಗಿ ನೆಲೆಸು 

ಕೇಳೆ ಹುಡುಗಿ, ನಿನ್ನ ಜೊತೆಗೆ ಇರುವೆ ಎಂದಿಗೂ ಎಂದೆಂದಿಗೂ !!


ಮಳೆಯಲಿ ನಿನ್ನ ಜೊತೆಗೆ ಕುಣಿಯುವ ಮನಸಾಗಿದೆ
ನಿನಗಾಗಿಯೇ ಬದುಕಿರುವೆ ಇಂದು ನಾನು 

ಕೇಳೆ ಹುಡುಗಿ, ನಿನ್ನ ಬಿಟ್ಟು ದೂರ ಹೋಗೋದಿಲ್ಲ ಎಂದಿಗೂ ಎಂದೆಂದಿಗೂ !!


ಚಂದ್ರನ ಬೆಳಕಿನಲ್ಲಿ ನಕ್ಷತ್ರವ ಎಣಿಸುವಾಸೆ ನನಗೆ 
ಕೈಯ ಹಿಡಿದು ಲೆಕ್ಕ ಸರಿ ಮಾಡಬೇಕು ನೀನು


ಕೇಳೆ ಹುಡುಗಿ, ಜೀವವು ನಿನಗಾಗಿಯೇ ಎಂದಿಗೂ ಎಂದೆಂದಿಗೂ !!

Wednesday, 9 August 2017

ನನ್ನ ಭಾರತ

ಅಂದು ವಿವೇಕಾನಂದರು ಹೇಳಿದರು ಏಳಿ ಎದ್ದೇಳಿ ಎಂದು
ಇಂದು ಯಾರಾದರೂ ಹೇಳಬೇಡವೇ ಏಳಿ ಎದ್ದೇಳಿ ಎಂದು

ಏಳಬೇಕು ನಾವಿಂದು ಬ್ರಷ್ಟಾಚಾರದಿಂದ
ಜಾಗೃತರಾಗಬೇಕು ನಾವಿಂದು ಅತ್ಯಾಚಾರದಿಂದ

ಕಟ್ಟಬೇಕು ನಾವು ಭವ್ಯ ಭಾರತವನಿಂದು
ಕನಸಾಗಿಸಬೇಕು ಕಲಾಂ ಅವರ ಆಸೆಗಳನಿಂದು

ಗಡಿನಾಡಿನಲ್ಲಿ ರಕ್ತ ಕೊಟ್ಟ ನಮ್ಮ ಯೋಧರಿಗಾಗಿ
ಹೊಲ ಗದ್ದೆಯಲಿ ದುಡಿವ ನಮ್ಮ ಅನ್ನದಾತರಿಗಾಗಿ

ಬನ್ನಿ ಎಲ್ಲಾ ಸೇರಿ ನಿಲ್ಲೋಣ ನವ ಭಾರತ ನಿರ್ಮಾಣಕ್ಕಾಗಿ
ಎದೆಯುಬ್ಬಿಸಿ ಹೇಳೋಣ ನಾವಿದ್ದೀವಿ ನಿಮ್ಮ ಜೊತೆಯಾಗಿ

ಭಾರತ್ ಮಾತಾ ಕಿ ಜೈ !!

Monday, 7 August 2017

ಓ ದೇವ !!

ಪುಟ್ಟ ಮಗುವಿನಲ್ಲಿ ನಿಸ್ವಾರ್ಥವನಿಟ್ಟೆ ತುಟಿಯಲ್ಲಿ ನಗುವನಿಟ್ಟೆ
ದೊಡ್ಡ ಮನುಷ್ಯರಲ್ಲಿ ಸ್ವಾರ್ಥವನಿಟ್ಟೆ ಮನಸಲ್ಲಿ ಕಲ್ಮಶವನಿಟ್ಟೆ

ತಾಯಿಯ ಹೃದಯದಲ್ಲಿ ಪ್ರೀತಿಯ ಗಿಡವನು ನೆಟ್ಟೆ
ಕೆಟ್ಟ ಜನರ ಹೃದಯದಲ್ಲಿ ಅಸೂಯೆಯ ಗಿಡವನು ನೆಟ್ಟೆ

ಒಂದು ಬೀಜದಿಂದ ದೊಡ್ಡ ಮರವನು ಮಾಡಿದೆ
ಸಣ್ಣ ಹೂವಿನಿಂದ ಸುಗಂಧವನು ತಂದೆ

ಕತ್ತಲ ಬಳಿಕ ಬೆಳಕು ಬರಲೇಬೇಕು ಎಂದೇ
ಒಂದಲ್ಲಾ ಒಂದು ದಿನ ಸಾವು ಸಾಶ್ವಾತ ಎಂದೇ

ಜನರ ಹೃದಯದಲ್ಲಿರುವ  ಅಸೂಯೆಯ ಕೊಲ್ಲು
ಜನರ ಹೃದಯದಲ್ಲಿ ಹೊಸ ಉತ್ಸಾಹವ ಚೆಲ್ಲು

ಸಾಯುವುದಕ್ಕೆ ಮುನ್ನ ಏನಾದರೂ ಸಾಧಿಸುವಂತೆ ಮಾಡು
ನಿನ್ನನು ನಂಬಿರುವ ಜನಕ್ಕೆ ತಮ್ಮ ಶಕ್ತಿಯ ಮೇಲೆ ನಂಬಿಕೆ ಬರುವಂತೆ ಮಾಡು

ಏನಾದರೂ ಮಾಡು ಎಂತಾದರು ಮಾಡು
ಎಲ್ಲರಿಗೂ ಒಳ್ಳೆಯದನ್ನು ಮಾಡು ಓ ದೇವ !! 

Friday, 4 August 2017

ಅಮ್ಮ

ಈ ಭೂಮಿಗೆ ಬಂದ ಮೊದಲ ಅಮೃತ ಹನಿ ಅಮ್ಮ
ನಾ ಕಣ್ಬಿಟ್ಟ ಕೂಡಲೇ ಕಂಡ ಮೊದಲ ವ್ಯಕ್ತಿ ಅಮ್ಮ

ಭಯದಿಂದ ನಿನ್ನ ಕಂಕಳಲ್ಲಿ ಅವಿತುಕೊಂಡು ಮಾಲುಗುತಿದ್ದೆ ನಾನು
ಪ್ರತಿ ಬಾರಿ ಬಿದ್ದಾಗ ಹೇಗೆ ಮೇಲೆದ್ದು ಮುನ್ನುಗುವುದೆಂದು ಹೇಳಿಕೊಡುತಿದ್ದೆ ನೀನು

ನನ್ನ ಪ್ರತಿಯೊಂದು ಕಷ್ಟ ಸುಖದಲ್ಲಿ ಜೊತೆಗಿರುವವಳು ನೀನು
ಯಾವುದೇ ಸಂದರ್ಭದಲ್ಲಿ ನನ್ನ ರಕ್ಷಿಸುವಂತವಲು ನೀನು

ಅಮ್ಮ ಎನ್ನೋ ಎರಡೇ ಪದದಲ್ಲಿ ಜಗತನ್ನೇ ತೋರಿಸಿದೆ ನೀನು
ಪ್ರೀತಿ ಎನ್ನೋ ಎರಡೇ ಪದದಲ್ಲಿ ಭಾವನೆಗಳನ್ನು ತೋರಿಸಿದೆ ನೀನು

ಕೈ ತುತ್ತು ಕೊಟ್ಟು ನನ್ನ ಇಷ್ಟು ದೊಡ್ಡವನಾಗಿಸಿದೆ ನೀನು
ಆ ನಿನ್ನ ವಾತ್ಸಲ್ಯಕ್ಕಿಂತ  ದೊಡ್ಡದು ಇರುವುದಾದರೂ ಏನು

ಈ ಜಗತಲ್ಲಿ ದೇವರನ್ನು ಕಂಡವರು ಯಾರು ಇಲ್ಲ
ಆದರೆ ನೀನಲ್ಲೇ ದೇವರನ್ನು ಕಾಣುತಿರುವೆನು ನಾನು

ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ನನಗೆ ತಿಳಿಯದಂತೆ ಸಾಕಿದೆ ನೀನು
ಮುಂದೆ ನಿನ್ನ ಜೀವನದಲ್ಲಿ ಬರಿ ಸುಖವನ್ನೇ ಕೊಡುವೆ ಎಂದು ಪ್ರಾಮಾಣಿಸುವೆ ನಾನು

ನನಗೆ ಆದ ಪೆಟ್ಟುಗಳಿಗೆ ನೀನು ಅಳುತಿದ್ದೆ
ಹಾಲು ಕೂಡಿಸಿ ಪ್ರೀತಿ ಉಣಿಸಿ ನನ್ನ ಬೆಳೆಸುತಿದ್ದೆ

ನಗುತ ನಗುತ ಇನ್ನೆಂದೂ ಬಾಳಬೇಕು ನೀನು ಅಮ್ಮ
ನನ್ನ ಬಾಳಿನ ಎಲ್ಲ ಶಕ್ತಿಯು ನೀನೇ ಅಮ್ಮ

Thursday, 3 August 2017

ನನ್ನ ಹುಡುಗಿ

ಅಪ್ಪಿಬಿಡು ಹುಡುಗಿ ಒಮ್ಮೆ ನಿನ್ನ ಬಿಟ್ಟು ಬೇರೆ ಯಾರು ಇಲ್ಲವೆನ್ನುವಂತೆ
ಒಪ್ಪಿಬಿಡು ಹುಡುಗಿ ಒಮ್ಮೆ ನಿನ್ನ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲವೆನ್ನುವಂತೆ

ನನ್ನ ಕನಸಿನ ರಾಣಿಯೇ ನೀನು
ಎಂದು ನಿನ್ನ ಜೊತೆಗಿರುವೆನು ನಾನು

ನಮ್ಮಿಬರ ಪ್ರೀತಿಯ ನೋಡಿ ನಕ್ಷತ್ರಗಳು ಹೊಟ್ಟೆಕಿಚ್ಚು ಪಡುತಿರುವರು
ನಿಮ್ಮಿಬರಂತೆ ಒಟ್ಟಿಗೆ ಇರುವುದು ಹೇಗೆ ಎಂದು ದಿನವೂ ನನ್ನ ಕೇಳುತಿರುವರು

ಆ ಚಂದ್ರನನ್ನು ಕಳೆದು ಹೋಗುವಂತೆ ಮಾಡುವೆವು ಮೋಡಗಳು
ಆ ಚಂದ್ರನಂತೆ ಕಳೆದು ಹೋಗುವೆನು ನಾನು ನೀನಿಲ್ಲದ ಬದುಕಿನಲಿ

ಬಂದು ಬಿಗಿದಪ್ಪಿಕೋ ಇಂದೇ ಕೊನೆಯ ದಿನವೆನ್ನುವಂತೆ
ಎಂದಿಗೂ ನಿನ್ನ ಬಿಟ್ಟು ಹೋಗುವುದಿಲ್ಲವೆನ್ನುವಂತೆ

ನೀ ಹೀಗೆ ಮಾತಾಡದೆ ಮೌನವಾದಾಗಲೆಲ್ಲ
ನನ್ನ ಬಗ್ಗೆಯೇ ಯೋಚಿಸುತಿರುವಂತೆ ಭಾಸವಾಗುತಿಹುದು

ಹೇಳಿ ಬಿಡು ಹುಡುಗಿ ಇಂದು ನೀನು
ಇರುವೆಯ ನನ್ನ ಜೊತೆಗೆ ಎಂದಿಗೂ ನೀನು ..

Tuesday, 1 August 2017

ಕನಸಿನ ಕನ್ಯೆ

ಅಂದು ಆಫೀಸ್ ಗೆ ರಸ್ತೆಯಲ್ಲಿ  ಹೋಗುತಿರಲು,
ಚೆಲುವಾದ ಹುಡುಗಿಯನ್ನು ಬಸ್ ಸ್ಟಾಪ್ ಒಂದರಲ್ಲಿ  ನೋಡಿದೆ

ಆಹಾ! ಎಂಥ  ಸೌಂದರ್ಯವತಿ ಎಂದು ಮನಸಿನಲ್ಲೇ ಅಂದುಕೊಂಡೆ
ನನಗಾದರೂ ಇಂಥ ಹುಡುಗಿ ಸಿಗಬಾರದ ಎಂದುಕೊಂಡೆ

ಸಂಜೆ ಆಫೀಸ್ ಮುಗಿಸಿ ಮನೆಗೆ ಬರಲು
ಅಮ್ಮ ನಿನಗೊಂದು ಜಾತಕ ಬಂದಿದೆ ಎಂದು ಹೇಳಿದಳು

ಸರಿ ಯಾರೆಂದು ನೋಡಲು ನನಗೆ ಸ್ವರ್ಗವೇ ಸಿಕ್ಕಂತಾಯಿತು
ಆ ಬಸ್ ಸ್ಟಾಪ್ ಚೆಲುವೆಯ ಫೋಟೋ ಕಣ್ಣ ಮುಂದೆ ಇತ್ತು

ಖುಷಿಯಿಂದ ನನ್ನ ಒಪ್ಪಿಗೆಯ ಸೂಚಿಸಿದೆ
ಹುಡುಗಿ ನೋಡುವ ದಿನಾಂಕ ನಿಶ್ಚಯ ಮಾಡಿಸಿದೆ

ಮನೆಯವರೆಲ್ಲ ಹುಡುಗಿ ನೋಡಲು ಹೊರೆಟೆವು
ಅವಳನ್ನು ಮತೊಮ್ಮೆ ನೋಡಲು ಕಣ್ಣುಗಳು ಕಾಯುತಿದ್ದವು

ಹುಡುಗಿ ಜೊತೆ ಹೋಗಿ ಮಾತಾಡು ಎಂದು ಅಮ್ಮ ಹೇಳಿದಳು
ಸರಿ ಅಂತ ಹೇಳಿ ಎದ್ದು ಹೋರಾಡಲು, ಕಾಲು ಎಡುವಿ ಕೆಳಗೆ ಬೀಳಲು

ತಲೆ ಎತ್ತಿ ನೋಡಲು ಮಂಚದಿಂದ ಕೆಳಗಡೆ ಬಿದ್ದಿದ್ಧೆ
ಕನಸಲ್ಲಿ ಬಂದಿದ್ದ ಹುಡುಗಿ ಬಗ್ಗೆ ನೆನಪಿಸಿಕೊಂಡು ನಗುತಿದ್ದೆ